Proofing

✦

This page has been fully proofread once and needs a second look.

ಸಂಗೀತ ಪಾರಿಭಾಷಿಕ ಕೋಶ
 
೩. ಬಿರಾನನನ್ನು ವ
ಹಂಸಧ್ವನಿ
ಸಾಮಗಾನಲೋಲ
ಸಾಲಗ ಭೈರವಿ
ಸೇವಿತಾ ಮುರಾರಮ್ಮ
ಶಹಾನ
ಈ ಕೃತಿಗಳಲ್ಲಿ ಕ್ಷೇತ್ರ ಮುದ್ರೆ ಇದೆ.
 
೫.
 

 
ಕಾಲಿಕ-
ಈ ರಾಗವು ೨೨ನೆ ಮೇಳಕರ್ತ ಖರಹರಪ್ರಿಯದ ಒಂದು ಜನ್ಯರಾಗ

ಸ ರಿ ಗ ಪ ದ ನಿ ಸ

ಸ ನಿ ದ ಪ ಗ ರಿ ಸ
 
೧೮೩
 
ಹಂಸಧ್ವನಿ
ಸಾಲಗ ಭೈರವಿ
 
ಶಹಾನ
 
ಸ ರಿ ಗ ಮ ಪ ನಿ ಸ
 
ಸ ನಿ ಪ ಮ ಗ ಗ ರಿ ಸ
 

 
ಕಾಳಿ-
ಕಾಳಿಕಾದೇವಿಯು ನಟರಾಜನೊಡನೆ ನಾಟ್ಯವಾಡಿದಳು. ಶಿವನು

ಊರ್ಧ್ವತಾಂಡವವನ್ನು ಮಾಡಲು ತೊಡಗಿದಾಗ ದೇವಿಯು ಆಶ್ಚರ್ಯಚಕಿತಳಾಗಿ

ಸುಮ್ಮನಾದಳು. ಇದರಿಂದ ವಿಷ್ಣು, ಬ್ರಹ್ಮ ಮುಂತಾದವರಿಗೆ ಆಶ್ಚರ್ಯವಾಯಿತು.

ಈ ನೃತ್ಯವು ವಾದ್ಯನುಡಿಸುವವರಿಗೆ ನೂತನವಾಗಿದ್ದುದರಿಂದ ಅವರೂ ಸುಮ್ಮನಾದರು.

ಆಗ ನಟರಾಜನು ಉಡುಕ್ಕೆ ವಾದ್ಯವನ್ನು ನುಡಿಸುತ್ತಾ ಊರ್ಧ್ವತಾಂಡವ ನೃತ್ಯ

ವನ್ನಾಡಿದನು. ಕೊಯಮತ್ತೂರು ಜಿಲ್ಲೆಯ ಪೇರೂರು ಮುಂತಾದ ದೇವಾಲಯ

ಗಳಲ್ಲಿ ನಟರಾಜನ ಊರ್ಧ್ವತಾಂಡವದ ಶಿಲ್ಪಗಳಿವೆ.
 
ಇವರು
 

 
ಕಾಳಿದಾಸ ನೀಲಕಂಠಅಯ್ಯರ್ -
ಇವರು ಮಾನಂಬುಚಾವಡಿ ವೆಂಕಟ

ಸುಬ್ಬಯ್ಯನವರ ಶಿಷ್ಯ ಪರಂಪರೆಗೆ ಸೇರಿದ ಒಬ್ಬ ಪ್ರಸಿದ್ಧ ಗಾಯಕ ಮತ್ತು ವಾಗ್ಗೇಯ

ಕಾರರು. ಇವರು ಕಾಳಿದಾಸ ನಾರಾಯಣಸಾಮಯ್ಯನವರ ಪುತ್ರರು.

ಅದ್ಯಾರಿನ ಕಲಾಕ್ಷೇತ್ರದಲ್ಲಿ ಅಧ್ಯಾಪಕರಾಗಿದ್ದು ನಂತರ ಮದ್ರಾಸ್ ಮ್ಯೂಸಿಕ್
ಸ
ಅಕಾಡೆಮಿಯ ಸಂಗೀತ ಉಪಾಧ್ಯಾಯರ ಕಾಲೇಜಿನ ಪ್ರಧಾನಾಚಾರ್ಯರಾಗಿದ್ದು

ತರುವಾಯ ಮದ್ರಾಸ್ ವಿಶ್ವವಿದ್ಯಾನಿಲಯದಲ್ಲಿ ಸಂಗೀತದ ಅಧ್ಯಾಪಕರಾಗಿದ್ದರು.

ಇವರು ರಾಮಸ್ವಾಮಿ ಶಿವನ್‌ರವರ ಕೆಲವು ಕೃತಿಗಳನ್ನು ಸ್ವರಪಡಿಸಿದ್ದಾರೆ. ಚಿನ್ನಿ ಕೃಷ್ಣ

ದಾಸ ವಿರಚಿತ ಅಂಬನಿನ್ನು ನೆರನತಿ ಎಂಬ ಕೃತಿಗೆ ಚಿಟ್ಟೆಸ್ವರಗಳನ್ನು ಸೇರಿಸಿದ್ದಾರೆ.

 
ಕಾಳಿಂದಿ-
ಈ ರಾಗವು ೨೨ನೆ ಮೇಳಕರ್ತ ಖರಹರಪ್ರಿಯದ ಒಂದು

ಜನ್ಯರಾಗ,
 
ಆ
 
ಆ
 

ಸರಿ ಗ ಮ ಪ ನಿ ಸ
ಸ ನಿ ಪ ಮ ಗ ಗ ರಿ ಸ
ಈ ರಾಗವು ಸಂಗೀತರತ್ನಾಕರ ಮತ್ತು ಸಂಗೀತಸಮಯಸಾರ ಎಂಬ ಗ್ರಂಥಗಳಲ್ಲಿ

ಉಕ್ತವಾಗಿದೆ.

ಈ ರಾಗವು ಪುಷ್ಪಲತಿಕ ಎಂಬ ಹೆಸರಿನಿಂದ ಪ್ರಚಲಿತವಾಗಿದೆ.

ಇಕನೈನನಾ ಮೊರವಿನರಾದ ಎಂಬ ಕೃತಿಯು ಈ ರಾಗದ ಪ್ರಸಿದ್ಧ ಕೃತಿ.
 

 
ಕಾಲಕ್ಷೇಪ-
ಸಂಗೀತ ಉಪನ್ಯಾಸಕ್ಕೆ ಕಾಲಕ್ಷೇಪವೆಂದು ಹೆಸರು. ಪುರಾಣ

ಗಳ ಕಧೆಗಳು, ರಾಮಾಯಣ, ಮಹಾಭಾರತ ಮುಂತಾದ ಗ್ರಂಥಗಳಲ್ಲಿ ಬರುವ

ಹಲವು ಪ್ರಸಂಗಗಳು, ಮಹಾಪುರುಷರ ಜೀವನಚರಿತ್ರೆ ಇತ್ಯಾದಿಗಳನ್ನು ಕುರಿತು